Index   ವಚನ - 89    Search  
 
ಬೆಚ್ಚನೆ ಮಡಕೆಯಂತೆ ಬೆಬ್ಬಿಸಿಕೊಂಡಿದ್ದಡೇನಯ್ಯಾ? ಮುತ್ತ ಹೂತಂತೆ, ಆಲ ಬಿಳಲು ಬಿಟ್ಟು, ಜಡೆಗಟ್ಟಿಕೊಂಡಿದ್ದಡೇನು? ಕಂಥೆಬೊಂತೆಯ ಹೊದೆದು ಚಿಂತಿಸುತಿದ್ದಡೇನು? ತನುಮನಧನ ವಂಚನೆಯಿಲ್ಲದ ಭಕ್ತನ ಮನವ ಮನೆಯಮಾಡಿಕೊಂಡಿಪ್ಪ, ಸಕಳೇಶ್ವರದೇವ.