Index   ವಚನ - 90    Search  
 
ಬೆಟ್ಟದ ಮೇಲಣ ಗಿಡಗಳು ಬೆಟ್ಟವ ಮುಟ್ಟಂತಿಪ್ಪವೆ? ವಿವರಿಸಿ ನೋಡಿದಡೆ, ಸೃಷ್ಟಿಯೊಳಗಣ ಪ್ರಾಣಿಗಳು ಪರಮನ ಮುಟ್ಟದಿಪ್ಪವೆ? ಕಷ್ಟರು ಬೇಡವೆಂದು ಬಿಟ್ಟೋಡುತ್ತಿಪ್ಪ ಪ್ರಾಣಿಗಳನಟ್ಟಿ, ಹಿಡಿದು ಕೊಂದಡೆ, ಸೃಷ್ಟಿಗೀಶ್ವರನಿಕ್ಕದಿಪ್ಪನೆ ನರಕದಲ್ಲಿ? ಒಡೆಯರಿಲ್ಲೆಂದು ಹಲವು ಪ್ರಾಣಿಗಳ ಹರಿಹರಿದು ಕೊಂದಡೆ, ಹರನಿಕ್ಕದಿಪ್ಪನೆ ಅಘೋರನರಕದಲ್ಲಿ? ಸಕಲಪ್ರಾಣಿಗಳಿಗೆ ಮೇಲಾರೈಕೆ, ನಮ್ಮ ಸಕಳೇಶ್ವರದೇವನಲ್ಲದೆ ಮತ್ತೊಬ್ಬರುಂಟೆ?