Index   ವಚನ - 99    Search  
 
ಮೇಘಧಾರೆಯಿಂದ ಸುರಿದ ಹನಿಯೆಲ್ಲ ಮುತ್ತಪ್ಪವೆ? ಧರೆಯ ಮೇಲಿಪ್ಪರೆಲ್ಲ ಶರಣರಪ್ಪರೆ? ಪರುಷವ ಮುಟ್ಟದೆ ಪಾಷಾಣವ ಮುಟ್ಟಿದ ಕಬ್ಬುನ ಹೇಮವಹುದೆ? ಅಷ್ಟವಿಧಾರ್ಚನೆ ಶೋಡಷೋಪಚಾರವ ಮಾಡಿ, ಭಾವ ಮುಟ್ಟದಿರ್ದಡೆ ವಾಯ ಕಾಣಿ ಭೋ. ರಜವ ತೂರಿ ಚಿನ್ನವನರಸುವಂತೆ, ನಿಮ್ಮನರಿಯದೆ, ಅಂಜನವನೆಚ್ಚಿದ ಕಣ್ಣಿಗೆ ತೋರೂದೆ ಕಡವರ? ಜಂಗಮವ ನಂಬಿದ ಮಹಂತಂಗೆ ತೋರದಿಪ್ಪನೆ ತನ್ನ? ಎಲ್ಲಾ ದೈವವ ಪೂಜಿಸಿ, ಬರಿದಾದೆಲವದ ಫಲದಂತೆ, ಸಕಳೇಶ್ವರನ ಸಕೀಲವನರಿಯದವರು ಇಲ್ಲಿಂದತ್ತಲೆ.