Index   ವಚನ - 110    Search  
 
ಶಿವಯೋಗಿ ಭಿಕ್ಷವ ಕೊಂಬಲ್ಲಿ ಜಾತಿಸೂತಕವಿಲ್ಲದಿರಬೇಕು, ಆಚಾರ ಸಂಕಲ್ಪವಿಲ್ಲದಿರಬೇಕು. ಶಿವಂಗೆ ಸಲ್ಲದ ದ್ರವ್ಯಕ್ಕೆ ಕೈಯಾನದಿರಬೇಕು. ಆಶೆ ರೋಷ ಹರುಷವಿಲ್ಲದಿರಬೇಕು. ಇಂತೀ ಕ್ರಮವನರಿದು, ಭಕ್ತಿಭಿಕ್ಷವ, ಲಿಂಗನೈವೇದ್ಯವ ಮಾಡಿಕೊಳ್ಳಬಲ್ಲ ಶರಣನ ನೀನೆಂಬೆ[ನ]ಯ್ಯಾ, ಸಕಳೇಶ್ವರಾ.