Index   ವಚನ - 112    Search  
 
ಶೀಲ ಶೀಲವೆಂದು ಗರ್ವೀಕೃತದಲ್ಲಿ ನುಡಿವ ಉದ್ದೇಶ ಪ್ರಾಣಿಗಳೆಲ್ಲರೂ ಅನಂತಶೀಲರೆ? ಹೂ ಬಾವಿ ಮಠಕ್ಕೆ ಸೀಮೆಯ ಮಾಡೂದು ಶೀಲವೇ? ಮನಕ್ಕೆ ಸೀಮೆಯ ಮಾಡೂದು ಶೀಲವಲ್ಲದೆ, ಹುಸಿಯ ಕಳೆವುದು ಶೀಲವಲ್ಲದೆ, ಭಕ್ತರ ಕಳೆವುದು ಶೀಲವೆ? ಲಿಂಗಪ್ರಾಣವ ಮಾಡೂದು ಶೀಲವಲ್ಲದೆ, ಪ್ರಾಣಲಿಂಗವ ಮಾಡೂದು ಶೀಲವೆ? ಇಂತೆಲ್ಲ ಶೀಲರು ದುಶ್ಶೀಲರು. ಸಕಳೇಶ್ವರದೇವಾ, ನಾನೇನೆಂದರಿಯೆ, ನೀನಿರಿಸಿದಂತಿರ್ಪೆ.