ಶ್ವಾನ ಮುಟ್ಟಿದ ಪಾಯಾಳು ಅಂಜನಕ್ಕೆ ಸಲುವನೆ?
ಭಕ್ತಿ ಮಿಶ್ರವಾದಡೆ ಈಶ್ವರನೊಲಿವನೆ?
ಅರಗು ಮಳಲು ಬೆರಸಿ ಉಕ್ಕ ಗೆಲುವಂತೆ,
ನಿಮ್ಮ ಬೆರೆಸಿದವರು ಇಟ್ಟೊರಸದಿಹರೆ ಷಡುದರುಶನವ?
ಸಾಗರವ ದಾಂಟುವವ ಬಸವನ ಬಾಲವ ಬಿಟ್ಟು,
ಮತ್ತೊಂದಕ್ಕೆ ಹರಿದು ಕಡಲನೊಡಗೂಡುವಂತೆ,
ಶಿವಲಿಂಗದೇವನ ಪೂಜಾಕ್ರಿಯೆಯ ಮರೆದೆಡೆ,
ಒಡಗೂಡದಿಹನೆ, ಕರ್ಮದ ಕಡಲವ?
ದಿಟಪುಟವಿಲ್ಲದ ಭಕ್ತಿಯ ಮೆಚ್ಚ, ಸಕಳೇಶ್ವರದೇವ.
Art
Manuscript
Music
Courtesy:
Transliteration
Śvāna muṭṭida pāyāḷu an̄janakke saluvane?
Bhakti miśravādaḍe īśvaranolivane?
Aragu maḷalu berasi ukka geluvante,
nim'ma beresidavaru iṭṭorasadihare ṣaḍudaruśanava?
Sāgarava dāṇṭuvava basavana bālava biṭṭu,
mattondakke haridu kaḍalanoḍagūḍuvante,
śivaliṅgadēvana pūjākriyeya maredeḍe,
oḍagūḍadihane, karmada kaḍalava?
Diṭapuṭavillada bhaktiya mecca, sakaḷēśvaradēva.