Index   ವಚನ - 114    Search  
 
ಶ್ರೀಗುರುವೆ ಬಸವ. ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ ಬಸವ. ಶತಕೋಟಿ ಬ್ರಹ್ಮಾಂಡಂಗಳು ನಿನ್ನ ರೋಮದ ತುದಿಯಲ್ಲಿಪ್ಪವು ಬಸವ. ಎನ್ನ ಭವವೆಂಬ ವಾರಿಧಿಯ ದಾಂಟುವುದಕ್ಕೆ ನಿನ್ನ ಬಾಲತುದಿಯ ಎಯ್ದಿದೆನು ಬಸವ. ಆರಾಧ್ಯಪ್ರಿಯ ಸಕಳೇಶ್ವರಾ, ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.