Index   ವಚನ - 5    Search  
 
ಅಗ್ಗದ ಹರಿಬ್ರಹ್ಮರ ಮರೆದೊಮ್ಮೆ ಹರಂಗೆ ಸಮವೆಂದಡೆ, ಅವನು ಚಾಂಡಾಲನು. ಅವನ ಮುಖವ ನೋಡಲಾಗದು. ಅದೆಂತೆಂದಡೆ: ಯೋ ಮಹಾದೇವಮನ್ಯೇನ ಹೀನದೇವೇನ ದುರ್ಮತಿಃ | ಸಕೃತ್ಸಾಧಾರಣಂ ಬ್ರೂಯಾದಂತ್ಯಜಾನಾಂತ್ಯಜೋಂತಜಃ || ಇಂತೆಂದುದಾಗಿ, ನಿಮಗೆ ಕಿರುಕುಳದೈವಂಗಳ ಸಮವೆಂದು ಬಗಳುವನ ಬಾಯಿ ಪಾಕುಳತಪ್ಪದು, ಬಸವಪ್ರಿಯ ಕೂಡಲಚನ್ನಸಂಗಮದೇವಾ.