Index   ವಚನ - 6    Search  
 
ಅಜನಂದು ಸಾರಿ ಹೇಳಿದ ಸುರಮುನಿಗಳೆಲ್ಲರಿಗೂ: ಶಿವನನೆ ಧ್ಯಾನಿಸಿ, ಶಿವನನೆ ಪೂಜಿಸಿ, ಶಿವಭಕ್ತಿಯೆ ನಿಮಗೆ ಪರಮಸಾಧನವೆಂದು ಬೊಬ್ಬಿಟ್ಟು, ಬೆರಳನೆತ್ತಿ ಸಾರಿದನು. ವಿಷ್ಣುಭಕ್ತಿಯಿಂದವೂ ತನ್ನ ಭಕ್ತಿಯಿಂದವೂ ನಿಮಗೆ ಸದ್ಗತಿ ಇಲ್ಲವೆಂದನು. ಅದೆಂತೆಂದಡೆ: ವಿಷ್ಣುಭಕ್ತ್ಯ ಚ ಮದ್ಭಕ್ತ ನಾಸ್ತಿ ನಾಸ್ತಿ ಪರಾಗತಿಃ | ಶಂಭು ಭಕ್ತೈವ ಸರ್ವೇಷಾಂ ಸತ್ಯಮೇವಮಯೋದಿತಂ || ಎಂದುದಾಗಿ, ದ್ವಿಜರಿಗೆ ಉಪದೇಶ ಬೇರಿನ್ನು ಮತ್ತಿಲ್ಲ, ಬಸವಪ್ರಿಯ ಕೂಡಲಚನ್ನಸಂಗಮದೇವಾ.