Index   ವಚನ - 11    Search  
 
ಅಯ್ಯಾ, ಎನಗೆ ಭಕ್ತಿಯುಂಟೆಂಬ ಮಾತೇ ಡಂಬು ನೋಡಯ್ಯಾ. ಎನಗಾ ಮಾತಿಂಗಧಿಕಾರವೆಲ್ಲಿಯದಯ್ಯಾ. ತಲೆಹುಳಿತ ನಾಯಿಗೆ ಉಚ್ಛಿಷ್ಟಾನ್ನ ಬಂದುದೆ ಭಾಗ್ಯವು. ಒಂದರೊಳಗೊಂದನರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಯ್ಯಾ.