ಅಯ್ಯಾ ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯಾ.
ಮರ ಬೆಂದು ನಿಂದುರಿಯಿತ್ತು, ಮಣ್ಣು ಜರಿದು ಬಿದ್ದಿತ್ತು.
ಉರಿ ಹೊಗೆ ನಂದಿತ್ತು, ಸ್ವಯಂಪ್ರಕಾಶವಾಗಿಪ್ಪ ಉರಿ ಉಳಿಯಿತ್ತು.
ಆ ಉರಿ ಬಂದು ಎನ್ನ ಕರಸ್ಥಲದಲ್ಲಡಗಿತ್ತು.
ಇದ ಕಂಡು, ನಾ ಬೆರಗಾಗಿ ನೋಡುತ್ತಿದ್ದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Ayyā maradoḷagaṇa kiccu marana suḍuttiddittayyā.
Mara bendu ninduriyittu, maṇṇu jaridu biddittu.
Uri hoge nandittu, svayamprakāśavāgippa uri uḷiyittu.
Ā uri bandu enna karasthaladallaḍagittu.
Ida kaṇḍu, nā beragāgi nōḍuttiddenayyā,
basavapriya kūḍalacennasaṅgamadēvā.