ಅಲ್ಲಿಂದತ್ತ ಪಶ್ಚಿಮ ಚಕ್ರಕ್ಕೆ ಏಕದಳ ಪದ್ಮ,
ಹವಣಿಸಬಾರದ ತೇಜ, ಏಕಾಕ್ಷರ,
ಕುರುಹಿಡಬಾರದ ನಾದ, ಅಪ್ರದರ್ಶನ ವರ್ಣ,
ನಿರ್ಭಿನ್ನ ಶಕ್ತಿ, ಸರ್ವಾತ್ಮನೆಂಬ ಜಂಗಮವೆ ಅಧಿದೇವತೆ.
ಪರಿಪೂರ್ಣ ಜಂಗಮಲಿಂಗ, ಅಕ್ಷರಾಕ್ಷ[ರ]ತೀತ, ನಿಶ್ಶಬವಾಗಿಪ್ಪುದು.
ಇಂತಪ್ಪ ಲಿಂಗಾಂಗವೆ ತಾನಾಗಿ, ಅವಿರಳ ಜಂಗಮಭಕ್ತಿಯ ಮಾಡಬಲ್ಲಾತನೆ,
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ
ಸಂಗನಬಸವಣ್ಣನಯ್ಯಾ, ಪ್ರಭುವೆ.
Art
Manuscript
Music
Courtesy:
Transliteration
Allindatta paścima cakrakke ēkadaḷa padma,
havaṇisabārada tēja, ēkākṣara,
kuruhiḍabārada nāda, apradarśana varṇa,
nirbhinna śakti, sarvātmanemba jaṅgamave adhidēvate.
Paripūrṇa jaṅgamaliṅga, akṣarākṣa[ra]tīta, niśśabavāgippudu.
Intappa liṅgāṅgave tānāgi, aviraḷa jaṅgamabhaktiya māḍaballātane,
basavapriya kūḍalacennasaṅgayyanalli
saṅganabasavaṇṇanayyā, prabhuve.