Index   ವಚನ - 17    Search  
 
ಅಷ್ಟತನುವಿನೊಳಗೊಂದು ತನುವಾಗಿ, ಜೀವಾತ್ಮನು ಪಾಶಬದ್ಧನು ಪಶುಪಾಗತಂತ್ರನು ಸ್ವತಂತ್ರವೆಲ್ಲಿಯದೊ? ಸ್ವತಂತ್ರ ಶಿವನೊಬ್ಬನೆ ತನ್ನ ಇಚ್ಛಾಲೀಲೆಯಿಂದಾಡಿಸುವ ಘೋರಸಂಸಾರ ಭವವಾರಿಧಿಯೊಳಗೆ ರಾಟಾಳದ ಗುಂಡಿಗೆಯೊಳಗಣ ಜಲದ ತೆರದಿ ತುಂಬುತ್ತ ಕೆಡಹುತ್ತವಿರುಹವೈಸಲ್ಲದೆ ತೆರಹಿಲ್ಲ. ಪುಣ್ಯಪಾಪಂಗಳ ಮಾಡಿ ಸ್ವರ್ಗನರಕಂಗಳ ಭೋಗಿಸಿ ಪರತಂತ್ರವಲ್ಲದೆ ಸ್ವತಂತ್ರವೆಲ್ಲಿಯದೊ? ಪುನರ್ಜನ್ಮ ಪುನರ್ಮೃತ್ಯುಃ ಪುನಃ ಕ್ಲೇಶಃ ಪುನಃ ಪುನಃ | ಸಗರಸ್ಥಘಟನ್ಯಾಯೋ ನ ಕದಾಚಿದವೈದೃಶಃ || ಎಂದುದಾಗಿ, ಜೀವಾತ್ಮಂಗೆ ಪರಮಾತ್ಮತ್ವ ಸಲ್ಲದಾಗಿ, ಅಷ್ಟತನುವಿನೊಳಗೊಂದು ತನು ಕಾಣಿಭೋ, ಎಲೆ ಅದ್ವೈತಿಗಳಿರಾ. ಹುಟ್ಟುಕುರುಡನು ತನ್ನ ಹಿರಿಯಯ್ಯ ಹೆತ್ತಪ್ಪಂಗೆ ಮುಖವೆಲ್ಲ ಕಣ್ಣೆಂದಡೆ, ತನಗಾದ ಸಿದ್ಧಿ ಯಾವುದು? ಆದಿ ಸಿದ್ಧಾಂತ ವೇದಾಂತ ಶಾಸ್ತ್ರವನೋದಿ ಕೇಳಿ ಹೇಳಿದಡೆ, ತನಗೇನು ಸಿದ್ಧಿಯಾದುದೆಲೆ ಆತ್ಮತತ್ತ್ವವಾದಿಗಳಿರಾ ಹೇಳಿರೆ? ಅಷ್ಟತನುಗಳೆಲ್ಲ ಪರತಂತ್ರವೆಂಬುದ ಶ್ರುತದೃಷ್ಟಾನುಮಾನಂಗಳಿಂ ನಿಮ್ಮ ತಿಳುಪುವದೆ? ಆತ್ಮಾಂತರಾಣಿ ಪಶವಃ ಪರತಂತ್ರಭಾವಾತ್ಸತಸ್ವತಂತ್ರಃ ಪಶುಪತೇ ಪಸುಧೇಶ್ವರಸ್ವಂ | ಆತ್ಮಾನಮಾಷನಿಷದಾ ಪ್ರವದಂತ್ಯನೀಶ ಈಶಂ ಭವಂತ ಮುಖಯೋರುಭಯಂ ಸ್ವಭಾವಃ || ಇಂತೆಂದುದಾಗಿ, ಆತ್ಮಂಗೆ ಪಶುತ್ವವೆ ಸ್ವಭಾವ, ಶಿವಂಗೆ ಪತಿತ್ವವೆ ಸ್ವಭಾವ, ಇದು ಶ್ರುತ. ಇನ್ನು ದೃಷ್ಟವೆಂತೆನಲು, 'ಜೀವಶ್ಶಿವಶಿವೋ ಜೀವಸ್ಯ ಜೀವಃ', ಜೀವನೆ ಶಿವನು, ಶಿವನೆ ಜೀವನು. ಬರಿದೆ ಶಿವನೆಂದು ನುಡಿವರು, ಮೇಲಣ ಪದಾರ್ಥವ ನುಡಿಯರು. ಪಾಶಬದ್ಧೋ ಪಶುಪ್ರೋಕ್ತಃ ಪಾಶಮುಕ್ತಃ ಪರಶ್ಶಿವಃ' ಎಂಬ ಪದಾರ್ಥವ ನುಡಿಯರು. 'ಪಾಶಬದ್ಧ ಜೀವನರಾಗಿ ಪಶುವೆನಿಸುವನು ಪಾಶಮುಕ್ತನು. ಶಿವನಾಗಿ ಆ ಪಶುವಿಂಗೆ ಪರನಾದ ಶಿವನು ಪತಿಯೆನಿಸುವನು. `ಬ್ರಹ್ಮದ ಸರ್ವದೇವಃ ವೇಷವಃ'ಯೆಂಬ ಶ್ರುತ್ಯಾರ್ಥವನು ಪ್ರಮಾಣಿಸಿ, ಪಶುವೆ ಪತಿಯೆಂದು ನುಡಿವರು ಅನಭಿಜ್ಞರು. || ಶ್ರುತಿ || `ರುದ್ರಃ ಪಶುನಾಮಧಿಪತಿರಿತಃ' ಪಶುಗಳಿಗೆ ಶಿವನೆ ಒಡೆತನವುಳ್ಳ ತನ್ನಾಧೀನವುಳ್ಳ ಮಾಯಾಪಾಶದಿಂ ಕಟ್ಟಲು ಬಿಡಲು, ಶಿವನೆ ಪತಿಯೆಂಬ ತಾತ್ಪರ್ಯಾರ್ಥವ ನುಡಿಯರು. ಇದು ದೃಷ್ಟಾಂತ, ಇನ್ನು ಅನುಮಾನವೆಂತೆನಲು ಕೇಳಿರೆ. ಮಾನುಷಂಗೆ ಪ್ರಸನ್ನಭಕ್ತಿ ಪ್ರಸಾದವ ಕೃಪೆ ಮಾಡಲು, ಮಾನುಷ್ಯಂಗೆ ಕಾಮಿತ ನಿಃಕಾಮಿತ ಭಕ್ತಿಯಿಂದ ಭೋಗಮೋಕ್ಷವನೀವನಾ ಶಿವನು. ನರನೊಳಗಾಗಿ ನರಪತಿಯ ಸೇವೆಯ ಮಾಡುವಲ್ಲಿ, ನಿರುಪಾಧಿಕ ಸೇವೆಯಿಂದ ಅತಿಶಯ ಪದವನೀವನು. ಉಪಾಧಿಕ ಸೇವೆಯಿಂದ ಸಾಧಾರಣಪದವನೀವನು. ಇದೀಗ ಅನುಮಾನ ಕಂಡಿರೆ. ಇಂತೀ ಅಷ್ಟತನುಗಳೊಳಗಾದ ಸಮಸ್ತರು ಪಶುಗಳು. ಇವಕ್ಕೆ ಪತಿ ಶಿವನೆಂಬುದಕ್ಕೆ ಕೇಳಿರೆ. ಪೃಥಿವ್ಯಾಭವ ಅಪಾಂ ಶರ್ವ ಆಜ್ಞೇ ರುದ್ರಃ ವಾಯೋರ್ಭೀಮಃ | ಆಕಾಶ್ಶಾತ್ಯ ಮಹಾದೇವ ಸೂರ್ಯಸ್ಯೋಗ್ರಃ ಚಂದ್ರಸ್ಯ ಸೋಮಃ | ಆತ್ಮನಃ ಪಶುಪತಿರಿತಃ | ಎಂದೆನಲು, ಅಷ್ಟತನುಗಳು ಪಶುಗಳು, ಪತಿ ಶಿವನು ಕೇಳಿರೆ. ಇಂತೀ ಅಷ್ಟತನುಗಳು ಶಿವನಾಜ್ಞೆಯ ಮೀರಲರಿಯವೆಂಬುದಕ್ಕೆ ದೃಷ್ಟಾವಾರುಣಿಚೋಪನಿಷತ್ಸುಭೀಸ್ಮಾದ್ವಾತಃ ಪವತೇಶ್ಚಾಗ್ನಿಶ್ಚಭಿಷೋದೇತಿ ಸೂರ್ಯಃ ಭೀಷಾಂದ್ರರ ಮೃತ್ಯುರ್ಧಾವತಿ ಪಂಚಮಃ | ಇಂತಾಗಿ, ಆಕಾಶಃ ಪರಪರಮೇಶಸ್ಯ ಶಾಸನಾದೇವ ಸರ್ವದಾ ಪ್ರಾಣಾಪಾನಾದಿಭಿಶ್ಚಯ ಭೇದ್ಯದಂತಯಿರ್ಲಹಿರ್ಜಗತ್ ಭಿಬರ್ತಿ ಸರ್ವರೀ ಸರ್ವರೀ ಸರ್ವಸ್ಯ ಶಾಸನೇವ ಪ್ರಭಾಜನಾ || ಎಂದುದಾಗಿ, ಹವ್ಯಂ ವಹತಿ ದೇವಾನಾಂ ತವ್ಯಂ ತವ್ಯಾಶ ತಾಮಪಿ | ಪಾಕಾದ್ಯಂ ಚ ಕರೋತ್ಯಗ್ನಿಃ ಪರಮೇಶ್ವರ ಶಾಸನಾತ್ || ಸಂಜೀವನಾದ್ಯಂ ಸರ್ವಸ್ಯ ಕುರ್ವಂತ್ಯಾಪಸ್ತದಾಜ್ಞಯಾ | ವಿಶ್ವಂ ವಿಶ್ವಂಭರಾನ್ನಿತಂ ದತ್ತೇ ವಿಶ್ವೇಶ್ವರಾಜ್ಞಯಾ | ತ್ರಿಭಿಕಿ ತ್ರೈಜಗಭಿಬ್ರತೇಜೋಬಿರ್ವಿಷಮಾದದೇ | ವಿವಿಸ್ಸರ್ವಸ್ಯ ಸಭಾನು ದೇವದೇವಸ್ಯ ಶಾಸನಾತ್ | ಪುಷ್ಯತ್ಯೇಷದಿಜತಾನಿ ಭೂತಾ ನಿಹ್ಲಾದಯಂತ್ಯಪಿ | ದೇವೈಶ್ಯಪಿಯತೇ ಚಂದ್ರಶ್ಚಂದ್ರ ಭೂಷಣಂ ಶಾಸನಾತ್ | ತೇಸ್ಯಾಜ್ಞಾಂ ವಿನಾ ತೃಣಾಗ್ರಮಪಿ ನಚಲತಿ || ಇಂತೆಂದುದಾಗಿ, ಇದು ಕಾರಣ, ಆತ್ಮಸ್ವರ ಬಸವಪ್ರಿಯ ಕೂಡಲಚೆನ್ನಸಂಗಯ್ಯನೆಂದರಿಯರೆಲ್ಲರು. ಪಶುಗಳು ಪಾಶಬದ್ಧರೆಂದು ಎತ್ತಿ ತರ್ಜನಿಯವ ಉತ್ತರ ಕೊಡುವರುಳ್ಳರೆ ನುಡಿ ಭೋ.