Index   ವಚನ - 66    Search  
 
ಮನಕ್ಕೆ ಮನ ಒಂದಾಗಿ, ಭಾವಕ್ಕೆ ಭಾವ ಒಂದಾಗಿ, ನಚ್ಚಿ ಮಚ್ಚಿದ ಶರಣರ ದರುಶನವಾದ ಬಳಿಕ, ಎತ್ತಲೆಂದರಿಯೆನಯ್ಯಾ ಲೌಕಿಕವ. ಬಸವಪ್ರಿಯ ಕೂಡಲಚೆನ್ನಸಂಗಾ, ನಿಮ್ಮ ಶರಣ ಪ್ರಭುದೇವರಿಗೆ ಶರಣೆಂಬುದಲ್ಲದೆ ಅನ್ಯವನೇನೆಂದೂ ಅರಿಯೆನು.