Index   ವಚನ - 68    Search  
 
ಮನದಲ್ಲಿ ಲಿಂಗ ಘನವೆಂದಡೆ ಸಾಲದೆ ಅಯ್ಯಾ? ವಚನದಲ್ಲಿ ಜಂಗಮ ಘನವೆಂದಡೆ ಸಾಲದೆ ಅಯ್ಯಾ? ಮನಸಿನ ವಚನದ ದಿಟಕ್ಕೆ ದೂರವೆ ಅಪ್ರಮಾಣವೆ ಅಯ್ಯಾ? ಹಿತ್ತಿಲಲ್ಲಿ ನಿಧಾನವಿರ್ದಡೇನು ತೆಗೆದು ಭೋಗಿಸದನ್ನಕ್ಕರ? ಬಸವಪ್ರಿಯ ಕೂಡಲಚೆನ್ನಸಂಗಯ್ಯಂಗೆ, ಅವರಂದಂದಿಗೆ ದೂರವಯ್ಯಾ