Index   ವಚನ - 72    Search  
 
ರಾಜಸ ತಾಮಸಕೆ ಕೊಂಡವರ, ಭಕ್ತರೆಂದವರ, ನೆಲೆಗೊಂಡಿರೆ ಸಲೆಯಾಗದು. ಆಗಳಿಕೆ ಆಗಳು ಅವಮಾನವಹುದು, ಮನೋವಿರೋಧವನು ಕಳೆಯಲುಬಾರದು. ಅವರು ತಮ್ಮಾಸೆಗೆ ಅದು ಸುಖವೆನುತಿಪ್ಪರು. ಬಂದ ಸಮಯವ ಕೈಕೊಂಡು, ಉಳ್ಳುದನೀವುದು ಕರಲೇಸು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.