ವೇದ ನಾಲ್ಕನು ಓದಿದಡೇನು? ಶಾಸ್ತ್ರವ ನೆರೆ ಕೇಳಿದಡೇನು?
ಶಿವಜ್ಞಾನಹೀನರು ಬಲ್ಲರೆ ಭಕ್ತಿಯ ಪಥವನು?
ಅಲೋಡ್ಯಂ ಚ ಚತುರ್ವೇದೀ ಸರ್ವಶಾಸ್ತ್ರವಿಶಾರದಃ |
ಶಿವತತ್ವಂ ನ ಜಾನಾತಿ ದರ್ವೀ ಪಾಕರಸಂ ಯಥಾ ||
ಕ್ಷೀರದೊಳಗಣ ಸಟ್ಟುಗ ಸವಿಸ್ವಾದುಗಳ ಬಲ್ಲುದೆ?
ಓದಿದ ನಿರ್ಣಯವ ನಮ್ಮ ಮಾದಾರ ಚೆನ್ನಯ್ಯ,
ಮಡಿವಾಳಯ್ಯ, ಡೋಹರ ಕಕ್ಕಯ್ಯನವರು ಬಲ್ಲರು,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Vēda nālkanu ōdidaḍēnu? Śāstrava nere kēḷidaḍēnu?
Śivajñānahīnaru ballare bhaktiya pathavanu?
Alōḍyaṁ ca caturvēdī sarvaśāstraviśāradaḥ |
śivatatvaṁ na jānāti darvī pākarasaṁ yathā ||
kṣīradoḷagaṇa saṭṭuga savisvādugaḷa ballude?
Ōdida nirṇayava nam'ma mādāra cennayya,
maḍivāḷayya, ḍ'̔ōhara kakkayyanavaru ballaru,
basavapriya kūḍalacennasaṅgamadēvā