Index   ವಚನ - 83    Search  
 
ಶಿವಂಗೆ ಬ್ರಹ್ಮವಿಷ್ಣುಗಳು ಸರಿಮಿಗಿಲೆನಲಾಗಿ, ಸುರಿಯವೆ ಬಾಯಲ್ಲಿ ಬಾಲಹುಳುಗಳು? ಧರೆ ಚಂದ್ರ ರವಿವುಳ್ಳನ್ನ ಬರ, ಇರದೆ ಉರಿಯುತ್ತಿಪ್ಪರಯ್ಯಾ, ನರಕದ ಕಿಚ್ಚಿನಲ್ಲಿ. ರುದ್ರಸ್ಯ ಬ್ರಹ್ಮವಿಷ್ಣುಭ್ಯಾಂ ನಾಧಿಕಂ ಪ್ರವದಂತಿ ಯೇ | ತೇಷಾಂ ಪಾಪಸ್ಯ ಸಾಂಕರ್ಯಮಸ್ತೀತಿ ಮಮ ನಿಶ್ಚಯಃ || ಇದು ಕಾರಣ, ಹರಿಬ್ರಹ್ಮಾದಿ ಸುರರೆಲ್ಲರೂ ನಿಮ್ಮ ಡಿಂಗರಿಗರೆಂದರಿದವರಿಗೆ ಪರಮಪದವಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.