ಶಿವಂಗೆ ಅಜ ಹರಿ ಸುರರು ಸರಿಯೆಂದು
ಮನದಲ್ಲಿದು ಹೊರವಂಟಡೆ, ಸ್ತುತಿಸಿದಡೆ,
ಶಿವದ್ರೋಹಿ ಚಾಂಡಾಲ ಮಟ್ಟಲಾಗದೆಂದುದು ವೇದ.
ಮಾತ್ವಾರುದ್ರಚುಕ್ರುಧಾ ಮಾನವಮೋಭಿರ್ಮಾ
ದುಷ್ಟುತೀ ಭೂಷಭ ಮಾನಹುತೀ |
ಉನ್ನೋ ವೀರಾಂ ಅರ್ಪಯ ಭೇಷಜೇ
ಭಿರ್ಭಿಷಿಕ್ತಮಂ ತ್ವಾಂ ಭಿಷಜಾಂ ಶೃಣೋಮಿ ||
ಎಂದುದಾ ಶ್ರುತಿ.
ಇದನರಿದರಿದು ಸರಿಯೆಂದು ನರಕಕ್ಕಿಳಿವಡೆ,
ಕಾರಣವಲ್ಲದು, ಬಸವಪ್ರಿಯ
ಕೂಡಲಚೆನ್ನಸಂಗಮದೇವಯ್ಯಾ.
Art
Manuscript
Music
Courtesy:
Transliteration
Śivaṅge aja hari suraru sariyendu
manadallidu horavaṇṭaḍe, stutisidaḍe,
śivadrōhi cāṇḍāla maṭṭalāgadendudu vēda.
Mātvārudracukrudhā mānavamōbhirmā
duṣṭutī bhūṣabha mānahutī |
unnō vīrāṁ arpaya bhēṣajē
bhirbhiṣiktamaṁ tvāṁ bhiṣajāṁ śr̥ṇōmi ||
endudā śruti.
Idanaridaridu sariyendu narakakkiḷivaḍe,
kāraṇavalladu, basavapriya
kūḍalacennasaṅgamadēvayyā.