Index   ವಚನ - 95    Search  
 
ಸನ್ಯಾಸಿಯಾದಡೂ ತ್ರಿಸಂಧ್ಯಾಕಾಲದಲ್ಲಿ ಶ್ರೀವಿಭೂತಿಯ ಧರಿಸಬೇಕೆಂದುದು ವೇದ. ಬಳಿಕಲೊಂದು ದಿವ್ಯಸ್ಥಾನದೊಳಗೆ ಶಿವಧ್ಯಾನದಲಿರಬೇಕೆಂದುದು ವೇದ. ಅದೆಂತೆಂದಡೆ: ಯತೀನಾಂ ಭಸ್ಮಂ ತ್ರಿಸಂಧ್ಯಾಯಾಮುದ್ಧೂಲಯೇತ್ | ದಿವ್ಯಸ್ಥಾನೇ ಶಿವಂ ಧ್ಯಾಯೇತ್ | ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯಾ, ಶ್ರೀವಿಭೂತಿಯೆ ಪರಮಗತಿ ಸಾಧನ.