ಸಕಲೇಂದ್ರಿಯಕ್ಕೆಲ್ಲಾ ನಾಯಕವಪ್ಪ ಮನಕ್ಕೆ
ಇದೆ ವಿಧಿಯೆಂದು ಹೇಳಿತ್ತು ವೇದ.
ಶಿವನ ನೆನೆವುದು, ಶಿವನ ಭಜಿಸುವುದು,
ಮತ್ತನ್ಯದೈವವ ನೆನೆಯಲಾಗದೆಂದುದು ಋಗ್ವೇದ.
ತಮುಷ್ಟುಹಿಯಸ್ವಿಷುಸ್ಸುದಂ ಸ್ವಾಯೋ ವಿಶ್ವಸ್ಯ ಕ್ಷಯತಿ ಭೇಷಜಸ್ಯ |
ಯಕ್ಷಾಮಹೀಸಾಯ ರುದ್ರಂ ನಮೋಬೇರ್ಧಿ ವಮಸುರುಮವಸ್ಯ |
ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯಾ.
Art
Manuscript
Music
Courtesy:
Transliteration
Sakalēndriyakkellā nāyakavappa manakke
ide vidhiyendu hēḷittu vēda.
Śivana nenevudu, śivana bhajisuvudu,
mattan'yadaivava neneyalāgadendudu r̥gvēda.
Tamuṣṭuhiyasviṣus'sudaṁ svāyō viśvasya kṣayati bhēṣajasya |
yakṣāmahīsāya rudraṁ namōbērdhi vamasurumavasya |
endudu śruti, basavapriya kūḍalacennasaṅgayyā