Index   ವಚನ - 103    Search  
 
ಹೊತ್ತಾರಿನ ಹೊತ್ತು ಮಲಮೂತ್ರ ವಿಸರ್ಜನಕ್ಕೆ ಹೋಯಿತ್ತು. ಮಧ್ಯಾಹ್ನದ ಹೊತ್ತು ಹಸಿವು ತೃಷೆಗೆ ಹೋಯಿತ್ತು. ಮೂರನೆಯ ಜಾವದ ಹೊತ್ತು ಹೊಟ್ಟೆತುಂಬಿದ ಬಳಿಕ, ಕಾಯದ ಕಳವಳವ ಕೈಕೊಂಬುದಯ್ಯಾ. ಇರುಳಾದ ಬಳಿಕ ನಿದ್ರೆಗೈದು, ಬೆಳಗಾಹನ್ನಬರ ಸತ್ತಂತಿಹೆನು ಹೆಣನಾಗಿ ಏನುವನರಿಯದೆ. ಅಯ್ಯಾ, ನಿಮ್ಮ ನೆನೆವವರ ಚರಣಕ್ಕೆ ಶರಣೆಂಬೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.