Index   ವಚನ - 102    Search  
 
ಹೆಡಗೆಹಾರ ಮೊರಹಾರ ಗೆರಸಿಹಾರ ಮಡಕೆಹಾರ ದೆಸೆದೆಸೆಯಲ್ಲಿ ತಂದು ನೀಡುತ್ತಿರಲು, ಹೊಸಪರಿಯ ಆರೋಗಣೆಯನವಧರಿಸುತ್ತಿರ್ದನು. ಆವಾವ ದೆಸೆಯಲ್ಲಿ ತಂದು ನೀಡುತ್ತಿರ್ದಡೆ, ಆ ದೆಸೆದೆಸೆಗಳೆಲ್ಲಾ ಬಾಯಾಗಿ ಕೊಳುತಿರ್ದನು! ಎತ್ತ ನೋಡಿದಡೆ ಅತ್ತತ್ತ ಮುಖ. ಅಗೆಯ ಹೊಯಿದಂತೆ ತೆರಹಿಲ್ಲ. ಒಂದು ನಿಮಿಷ ಎಡಹಿದಡೆ, ಅಕ್ಕಿಗಚ್ಚು ನುಚ್ಚು ತವುಡು ಮೊದಲಾಗಿ ಹೆಚ್ಚಿದವು ನಿಮಿಷದೊಳು. ಭಕ್ತಿಬಂಧುಗಳೆಲ್ಲಾ ತಮ್ಮ ತಮ್ಮ ಮಠದಲಾದ ಸಯಿದಾನವ ತಂದು, ಸಾರಗಟ್ಟಿ ನೀಡುತ್ತಿರ್ದಡೆ, ಅದ್ಭುತದಾರೋಗಣೆಯ ಕಂಡು, ಹರಿಹರಿದು ಪಾಕಯತ್ನವ ಮಾಡಿ ಎನ್ನುತ್ತ ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಸಂತೋಷದೊಳೋಲಾಡುತ್ತಿರ್ದನು ಎನ್ನ ಪರಮಗುರು ಬಸವಣ್ಣನು.