ಸ್ವಸ್ಥ ಪದ್ಮಾಸನದಲ್ಲಿ ಕುಳ್ಳಿರ್ದು
ಅತ್ತಿತ್ತ ಚಲಿಸದೋಸರಿಸದೆ
ನಿಟ್ಟೆಲುವು ನೆಟ್ಟನೆ ಮಾಡಿ,
`ಅಧೋಗಮನ' ವಾಯುವನೂರ್ಧ್ವಮುಖವಂ ಮಾಡಿ
ಮನ ಶಕ್ತಿ ಸಂಧಾನಗೊಳಿಸಿ,
ಚತುಃಪದ ಮಧ್ಯ ಪೀಠದೊಳಿಪ್ಪ
ಜ್ಯೋತಿರ್ಮಯಲಿಂಗವಂ, ಕಾಣುತ್ತಿರಲಾ
ಬೆಳಗು ಮೂರು ಲೋಕವನ್ನಾವರಿಸಿ
ಕತ್ತಲೆ ಹರಿದು ಬೆಳಗುಳಿದು,
ಉದಯಾಸ್ತಮಾನವೆಂಬೆರಡರಿಯದಿರ್ದೆ ಗುಹೇಶ್ವರಾ.
Transliteration Svastha padmāsanadalli kuḷḷirdu
attitta calisadōsarisade
niṭṭeluvu neṭṭane māḍi,
`adhōgamana' vāyuvanūrdhvamukhavaṁ māḍi
mana śakti sandhānagoḷisi,
catuḥpada madhya pīṭhadoḷippa
jyōtirmayaliṅgavaṁ, kāṇuttiralā
beḷagu mūru lōkavannāvarisi
kattale haridu beḷaguḷidu,
udayāstamānavemberaḍariyadirde guhēśvarā.
Hindi Translation स्वस्थ पद्मासन में बैठकर इधट उधर न चले बिना
सरके रीडकी हड्डी सीधा कर,
"अघोगमन" वायु का ऊर्ध्व मुख बनाकर,
मन शक्ति संधान कर,
चतुःपद मध्य पीठ में रहे ज्योतिर्मय लिंग को,
देखता रहे प्रकाश तीनों लोकों में फैलकर,
अंधकार फटकर प्रकाश बचकर,
उदयास्तमान कहेंदोनों को न जानते रहा गुहेश्वरा ।
Translated by: Eswara Sharma M and Govindarao B N