ಕಾಯದೊಳಗಣ ಕೂಟವ ಬಿಟ್ಟು,
ಕಣ್ಣಿನೊಳಗಣ ನೋಟವ ಬಿಟ್ಟು,
ಮನದೊಳಗಣ ಜಗದಾಟವ ಬಿಟ್ಟು,
ಏತರಲ್ಲಿದ್ದೊ ಕಲೆದೋರದೆ, ಕಂಜಪತ್ರದ ಅಂಬುವಿನಂತೆ,
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರನು.
Art
Manuscript
Music
Courtesy:
Transliteration
Kāyadoḷagaṇa kūṭava biṭṭu,
kaṇṇinoḷagaṇa nōṭava biṭṭu,
manadoḷagaṇa jagadāṭava biṭṭu,
ētaralliddo kaledōrade, kan̄japatrada ambuvinante,
sagarada bom'manoḍeya
tanumana saṅgamēśvaranu.