Index   ವಚನ - 31    Search  
 
ಕಾಲಕಣ್ಣಿನಲ್ಲಿ ಒಬ್ಬ ಬಾಲೆ ಹುಟ್ಟಿದಳು. ಆ ಬಾಲೆಗೆ ಮೊಲೆ ಒಂದೆ, ಉಂಬ ಮಕ್ಕಳು ಐವರು. ಅವಳ ಗಂಡ ಶಿಖಂಡಿ, ಮಕ್ಕಳು ಹುಟ್ಟಿದ ಭೇದವ ಹೇಳಾ. ಮಕ್ಕಳು ಅಪ್ಪಾ ಎಂಬುವುದಕ್ಕೆ ಮೊದಲೆ ಸತ್ತ, ಹೆತ್ತ ತಂದೆ. ಅವನ ಹೆಂಡತಿ ಅವನೊಂದಾಗಿ ಹೊಂದಲೊಲ್ಲದೆ, ಮಿಂಡನೊಂದಿಗೆಹೊಂದಿದ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.