ಚಿತ್ತು ಘಟವ ಹೊತ್ತು ಇಹಾಗ,
ನಿತ್ಯಾನಿತ್ಯವನರಿದುದಿಲ್ಲ.
ಸತ್ವ ರಜ ತಮವ ಹೊತ್ತಾಡುವಲ್ಲಿ,
ಭವಲೇಪ ನಿಶ್ಚಯವನರಿಯಬೇಕು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
Art
Manuscript
Music
Courtesy:
Transliteration
Cittu ghaṭava hottu ihāga,
nityānityavanaridudilla.
Satva raja tamava hottāḍuvalli,
bhavalēpa niścayavanariyabēku,
sagarada bom'manoḍeya tanumana saṅgamēśvarā.