Index   ವಚನ - 73    Search  
 
ರಜವೆಂಬ ಹೂವಿನ ಗಿಡುವಿನಲ್ಲಿ, ನಿರ್ಜರವೆಂಬ ಕುಸುಮ ಹುಟ್ಟಿತ್ತು. ನಿರವಯವೆಂಬ ಗಂಧ ಸಂಭ್ರಮಿಸಿತ್ತು. ಕೈಯುಗುರಿನಲ್ಲಿ ಮುಟ್ಟದೆ, ಮನದ ನಖದ ಕೊನೆಯಲ್ಲಿ ಎತ್ತಿ, ನಿರೂಪವ ಮಂಡೆಯ ಮೇಲಿರಿಸಲು, ಎನ್ನ ಸಗರದ ಬೊಮ್ಮನೊಡೆಯ ತನುಮನ ಸಂಗವಾದಲ್ಲಿ, ಅಭೇದ್ಯವಾದ ಪ್ರಾಣಲಿಂಗಕ್ಕೆನ್ನ ಪ್ರಾಣಪೂಜೆಯಾಯಿತ್ತಯ್ಯಾ.