ಶಕ್ತಿಯಂಗದ ಯೋನಿಯಲ್ಲಿ ಶುಕ್ಲ ಸೋರಿ,
ಬೆಚ್ಚು ಪುತ್ತಳಿಯಾದ ಠಾವಾವುದು?
ಕೂಡಿದನಪ್ಪ, ಕೂಡಿಸಿಕೊಂಡಳವ್ವೆ.
ಉಭಯದ ಯೋಗದಿಂದಾದ ಮತ್ತೆ ಬ್ರಹ್ಮನ ಅಗಡವೇಕೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ?
Art
Manuscript
Music
Courtesy:
Transliteration
Śaktiyaṅgada yōniyalli śukla sōri,
beccu puttaḷiyāda ṭhāvāvudu?
Kūḍidanappa, kūḍisikoṇḍaḷavve.
Ubhayada yōgadindāda matte brahmana agaḍavēke,
sagarada bom'manoḍeya tanumana saṅgamēśvarā?