ಹುಟ್ಟಿ ಹೋಟಾರದಲ್ಲಿ ಒಂದಾವೆ,
ಕೋಟಿ ಮರಿಯನಿಕ್ಕಿತ್ತು
ಅವಕ್ಕೆ ಊಟ ಎಲ್ಲಿಂದ ಬಹವು ಎಂಬುದನರಿತಲ್ಲಿ,
ಲಿಂಗಮೂರ್ತಿಯ ಧ್ಯಾನ.
ಆ ಕೂರ್ಮ ತನ್ನೂಟ, ಅವರಸುವಿನಾಟ.
ಸಗರದ ಬೊಮ್ಮನೊಡೆಯ
ತನುಮನದಲ್ಲಿ ಕೂರ್ತು ಸಂಗವಾಗಿರು.
Art
Manuscript
Music
Courtesy:
Transliteration
Huṭṭi hōṭāradalli ondāve,
kōṭi mariyanikkittu
avakke ūṭa ellinda bahavu embudanaritalli,
liṅgamūrtiya dhyāna.
Ā kūrma tannūṭa, avarasuvināṭa.
Sagarada bom'manoḍeya
tanumanadalli kūrtu saṅgavāgiru.