ಹೂವ ಕೊಯ್ಯುವರಲ್ಲದೆ, ಹೂವಿನ
ಗಂಧವ ಕೊಯ್ದವರುಂಟೆ ಅಯ್ಯಾ?
ಮಾತನಾಡುವರಲ್ಲದೆ, ಮಾತಿನ ಭೇದದ
ವಾಸನೆಯ ಕಂಡವರುಂಟೆ ಅಯ್ಯಾ?
ಇದು ನೀತಿಯ ಒದಗು,
ಕ್ರೀಯ ನಿಹಿತವಾಗಿ ಮಾಡುವಲ್ಲಿ
ಭಾವಶುದ್ಧವಾಗಿರಬೇಕು.
ಮಾತನರಿದಾಡುವಲ್ಲಿ, ಮಾತಿನ ರೀತಿಗೆ
ತಾ ಒದಗು ನಿಹಿತವಾಗಿರಬೇಕು.
ಅದು ಕೂಟಸ್ಥ,
ಸಗರದ ಬೊಮ್ಮನೊಡೆಯ
ತನುಮನ ಸ