Index   ವಚನ - 8    Search  
 
ನಿನ್ನ ಓಲೈಸಿಕೊಂಡ ಜೀವಿತಕ್ಕೆ ಲಿಂಗದ ಹಂಗು. ಆ ಹಂಗಿನಿಂದ ಗುರುಚರದ ಹಂಗು. ಈ ಮೂರರಿಂದ ಭಕ್ತಿಯೆಂಬ ಸಂದಣಿಯ ಹಂಗು. ಇದರ ಸಂದೇಹವ ಎನಗೊಂದು ಬಾರಿ ತೋರಾ, ಸಂಗನಬಸವಣ್ಣಪ್ರಿಯ ಐಘಂಟೇಶ್ವರಲಿಂಗಾ.