ಯಾಚಕನ ಮಾಟ, ಕೀರ್ತಿಗೆ ಇಕ್ಕುವನ ಮನೆಯಲ್ಲಿಯ ಊಟ,
ಜಗ ಮೆಚ್ಚಬೇಕೆಂದು ಮಾಟ ಕೂಟ, ಮನ ಮೆಚ್ಚಬೇಕೆಂಬುದಕ್ಕಿಲ್ಲ.
ಇಂತೀ ಮಾಟ ಕೂಟ, ಅವನ ವ್ರತದಾಟ,
ಕೂಸು ಹೇತು ಕಲಸಿ, ತಮ್ಮಪ್ಪನ ಬಾಯಲ್ಲಿ ಇಕ್ಕಿ,
ಮಿಕ್ಕುದ ತೋರಿದಂತಾಯಿತ್ತು.
ವರ್ತಕ ಚಿತ್ತಶುದ್ಧವಿಲ್ಲದವನ
ತ್ರಿವಿಧದ ಗೊತ್ತಿನ ಪೂಜೆ ಮಾಡಿ,
ನಷ್ಟವಹುದಕ್ಕೆ ಇದೇ ದೃಷ್ಟ. ಇದಕ್ಕೆ
ಐಘಂಟೇಶ್ವರಲಿಂಗವೇ ಸಾಕ್ಷಿ.
Art
Manuscript
Music
Courtesy:
Transliteration
Yācakana māṭa, kīrtige ikkuvana maneyalliya ūṭa,
jaga meccabēkendu māṭa kūṭa, mana meccabēkembudakkilla.
Intī māṭa kūṭa, avana vratadāṭa,
kūsu hētu kalasi, tam'mappana bāyalli ikki,
mikkuda tōridantāyittu.
Vartaka cittaśud'dhavilladavana
trividhada gottina pūje māḍi,
naṣṭavahudakke idē dr̥ṣṭa. Idakke
aighaṇṭēśvaraliṅgavē sākṣi.