•  
  •  
  •  
  •  
Index   ವಚನ - 1587    Search  
 
ಹಲವು ಮಕ್ಕಳ ತಾಯಂತೆ, ಹೇಸದೆ ಅವರನಾರೈದ ತನುಸಮರ್ಥವು ನಿಮಗಲ್ಲದೆ ಇನ್ನಾರಿಗೆ ಅಳವಡುವದು? ಮುನ್ನಾರಿಗೆ ಅಳವಡುವದು? ಇನ್ನು ಎನ್ನಳವೆ ನಿಮ್ಮುವನು ತಿಳಿಯಲು? ಮುನ್ನಿನ ಸುಕೃತ ಉಂಟಾಗಿ ನಿಮ್ಮ ಪಾದ ದೊರೆಕೊಂಡಿತ್ತು! ಇನ್ನು ನಮ್ಮನಿಳಿಯ ಬಿಡದೆ, ಎನ್ನುವನು ಇವನೆಂದು ವಿವರಿಸಿ, ಎನ್ನ ನಿಮ್ಮತ್ತ ತೆಗೆ ಕರುಣಿಸಿ. ಎನ್ನ ಮಾತಾಪಿತ-ಗುಹೇಶ್ವರಾ, ನಿಮ್ಮ ಶರಣ ಮಡಿವಳ ಮಾಚಯ್ಯನಿಂದ ಬಯಲಾದೆನು, ಮುಕ್ತನಾದೆನು ನಿಮ್ಮ ಕರುಣದಿಂದ!
Transliteration Halavu makkaḷa tāyante, hēsade avaranāraida tanusamarthavu nimagallade innārige aḷavaḍuvadu? Munnārige aḷavaḍuvadu? Innu ennaḷave nim'muvanu tiḷiyalu? Munnina sukr̥ta uṇṭāgi nim'ma pāda dorekoṇḍittu! Innu nam'maniḷiya biḍade, ennuvanu ivanendu vivarisi, enna nim'matta tege karuṇisi. Enna mātāpita-guhēśvarā, nim'ma śaraṇa maḍivaḷa mācayyaninda bayalādenu, muktanādenu nim'ma karuṇadinda!
Hindi Translation कई बच्चों की माता ने जैसे बिना असह्य उनको पालना किया शरीर समर्थ तुमारे बिना और किनको ठीक होगा ? फिर और को ठीक होगा ? और मेरे वश में है तुम्हें समझना ? पहले के सुकृत से तुमारा पाद मिला था । और हम्हें दूर किये बिना,यह मेरा कहते विवरण दे, मुझे तुमारी तरफ कृपाकर लीजिये । मेरे माता-पिता –गुहेश्वर, तुमारा शरण मडिवाळ माचय्या से शून्य हुआ, मुक्त हुआ तुमारी करूणा से । Translated by: Eswara Sharma M and Govindarao B N