ಮಹಿಮಾಪದದಲ್ಲಿ ಒಂದು ಮನೋಹರದ ಪಟ್ಟಣ.
ಪಟ್ಟಣದ ಸುತ್ತುವಳೆಯದಲ್ಲಿ ಇಕ್ಕಿದ ಕೋಟೆ.
ರಸಮಂದಿರದ ಮಣ್ಣು, ನಿರಂಜನದ ಅಗಳು.
ತತ್ವಾರ್ಥದ ಆಳುವೇರಿ, ಮಂಡೆಗೆಮರೆ ತೆನೆ.
ಮುಕ್ತಿ ನಿಶ್ಚಯವಾದ ಪೃಥ್ವಿಪಟ.
ಅದರೊಳಗಾದ ಎಂಬತ್ತನಾಲ್ಕು ಲಕ್ಷ ಮನೆಯಲ್ಲಿ
ಹೊಂದುವರೊಬ್ಬರೂ ಇಲ್ಲ.
ಪಟ್ಟಣ ಆರಿಗೂ ಸಾಧ್ಯವಲ್ಲ,
ಬಂಕೇಶ್ವರಲಿಂಗವನರಿತವರಿಗಲ್ಲದೆ.