Index   ವಚನ - 41    Search  
 
ದಬ್ಬಳ ಧರೆಯ ಚುಚ್ಚಲಾರದೆ, ಹಾಗ ಮುಳ್ಳು ಮೂರುಲೋಕವ ಚುಚ್ಚಿತ್ತು. ರಟ್ಟೆ ಬಲಿದ ಹಕ್ಕಿ ಹಾರಲಾರದೆ, ಆ ಕೊಂಬಿಂದ ಈ ಕೊಂಬಿನಲ್ಲಿ ಉಳಿಯಿತ್ತು. ತುಪ್ಪುಳ ಬಾರದ ಮರಿ ಮಹದಾಕಾಶವ ಸುತ್ತಿತ್ತು. ಹೆತ್ತವಳರಿಯದ ಮದ, ಆಗ ಹುಟ್ಟಿದ ಶಿಶು ಅರಿಯಿತ್ತು. ತಮ್ಮವ್ವೆಗೆ ಮದ್ದ ಕೊಟ್ಟು, ತಾ ಸತ್ತಿತ್ತು, ಬಂಕೇಶ್ವರಲಿಂಗದಲ್ಲಿ.