Index   ವಚನ - 51    Search  
 
ತತ್ವಾರ್ಥವ ಬಲ್ಲವಂಗೆ ಆ ತತ್ವಾರ್ಥವೆ ಕತ್ತಲೆಯ ಮಾಯೆ. ಅಧ್ಯಾತ್ಮವ ಬಲ್ಲವಂಗೆ ಆ ಪವನನೆ ತನ್ನ ಸುತ್ತಿದ ಮಾಯೆ. ಕ್ರೀಭಾವವಂತರಿಗೆ ಸಂದೇಹವೆ ತನ್ನ ಸುತ್ತಿದ ಮಾಯೆ. ಇಂತಿವನಹುದಲ್ಲಾ ಎಂಬುದು ತಾ ಮಾಯೆ, ಬಂಕೇಶ್ವರಲಿಂಗವ ಕೇಳಿಕೊಂಬ.