Index   ವಚನ - 61    Search  
 
ಆಚಾರ ಕ್ರೀ ಸನ್ನದ್ಧವಾಗಿ ನಿಂದಲ್ಲಿ, ಅದು ಅರಿವಿನ ಘನ, ವಿರಕ್ತಿಯ ಒಡಲು, ಸರ್ವ ಅರ್ಪಿತ, ಅವಧಾನದ ಚಿತ್ತದ ಕೈ, ಉಭಯಪರಿಪೂರ್ಣದೃಷ್ಟಿ. ಸತ್ಪಥದ ಸಿಕ್ಕಿಲ್ಲದ ಮಾರ್ಗ, ಅದು ಉಭಯ ಕೇವಲಜ್ಞಾನ, ದಂಪತಿ ಸಂಬಂಧಲೇಪ, ಬಂಕೇಶ್ವರಲಿಂಗದಲ್ಲಿ ಉಭಯಸ್ಥಲ ಅಳವಟ್ಟ ಶರಣಂಗೆ.