Index   ವಚನ - 64    Search  
 
ಘಟ ದೀಪಾಂತರ ಮಾರುತ ಮಾವಿಂದ ಬಂದಿತ್ತೊಂದು ವಿಕಟಾಂಗದ ಕುದುರೆ. ಬಾಯಿಗೆ ಹಲ್ಲಣ, ಲೆಕಕ್ಕೆ ಕಡಿವಾಣ, ಹಲ್ಲಿಗೆ ಹಕ್ಕರಿಕೆ, ಅದರ ಮೇಲಿದ ಬಲ್ಲಹಂಗೆ ಭಲ್ಲೆಹ ಟೌಳಿ. ಸುಲಲಿತ ಕರಗಸ ಸಿಂಗಾಡಿಗತ್ತಿ, ಜವದಾಡೆ, ಅಲ್ಲಿ ಅದೆ, ಅವನುಡಿಯಲ್ಲಿ. ರಾವುತನ ತಲೆ, ಕುದುರೆಯ ಕಾಲು, ಭಲ್ಲೆಹದ ಮೊನೆ, ಅಲ್ಲಿಯೆ ಅಡಗಿತ್ತು, ಬಂಕೇಶ್ವರಲಿಂಗವ ಅರಿದ ಅಸುವಾಹಕಂಗೆ.