ಇದಿರಗುಣ ಸಂಪಾದಿಸುವಲ್ಲಿಯೆ ತನ್ನಯ ಮರವೆ.
ಇದಿರೆಡೆಗೆ ತಾನಲ್ಲದೆ,
ತನಗೆ ಇದಿರೆಡೆಯಿಲ್ಲದೆ,
ಉಭಯಕ್ಕೆ ಒಡಲಿಲ್ಲದೆ,
ತನ್ನ ಕ್ರೋಧವೆ ಇದಿರಿಂಗೆ ರೂಪು,
ತನ್ನ ಸುಚಿತ್ತವೆ ಇದಿರಿಂಗೆ ಸಮಾಧಾನ.
ಇಂತೀ ಭಾವವನರಿ, ಬಂಕೇಶ್ವರಲಿಂಗದಲ್ಲಿ.
Art
Manuscript
Music
Courtesy:
Transliteration
Idiraguṇa sampādisuvalliye tannaya marave.
Idireḍege tānallade,
tanage idireḍeyillade,
ubhayakke oḍalillade,
tanna krōdhave idiriṅge rūpu,
tanna sucittave idiriṅge samādhāna.
Intī bhāvavanari, baṅkēśvaraliṅgadalli.
ಸ್ಥಲ -
ಸದ್ಭಾವಭಕ್ತಿವಿರಕ್ತಿಲೇಪಸ್ಥಲ: