ಚಿದ್ಘನದ ಒಂದನೆಯ ಮೂರ್ತಿ ರುದ್ರನ ಅವತಾರ.
ಆ ಚಿದ್ಘನದ ಎರಡನೆಯ ಮೂರ್ತಿ ವಿಷ್ಣುಭಾವ.
ಆ ಚಿದ್ಘನದ ಮೂರನೆಯ ಮೂರ್ತಿ ಬ್ರಹ್ಮಭಾವ.
ಇವು ಮೂರು ಕೂಡಿ ಜಗವನಳಿದು ನಿಂದಲ್ಲಿ ಈಶ್ವರಭಾವ.
ಈಶ್ವರ ವೇಷವಡಗಿ ನಿಂದಲ್ಲಿ ಸದಾಶಿವಭಾವ.
ಸದಾಶಿವಮೂರ್ತಿ ಸನ್ನದ್ಧವಾದಲ್ಲಿ ಪರಶಿವತತ್ವ,
ತತ್ವ ನಿಶ್ಚಯವಾದಲ್ಲಿ ಬಂಕೇಶ್ವರಲಿಂಗನ ಕೂಟ.