Index   ವಚನ - 82    Search  
 
ನಿಜ ನಿಶ್ಚಯವಾದಲ್ಲಿ ಚಿಲುಮೆ ಜಲ, ಸಕಲರುಚಿ, ವಿಚ್ಛಂದವಾಗಿ ಬಯಕೆಯ ಬಿಟ್ಟುದೆ ಲವಣನಾಸ್ತಿ. ಸರ್ವಕರಣೇಂದ್ರಿಯಂಗಳ ಸಂಸರ್ಗಕ್ಕೆ ಮನವನೀಯದಿದ್ದುದೆ ಭವಿ ವಿರೋಧ. ಉಚಿತ ತತ್ಕಾಲಂಗಳಲ್ಲಿ ಅಪ್ಯಾಯನವರಿತು ವಿಶ್ರಮಿಸೂದೆ ಕೃತ್ಯದ ಕಟ್ಟಣೆ. ಮನಬಂದಂತೆ ನುಡಿದು, ತನುಬಂದಂತೆ ಆಡಿ, ನಿಂದಿಹ ಸ್ಥಿತಿಯ ತಾನಾಡಿ, ಹಲಬರ ಕೈಯಲ್ಲಿ ಕೇಳಿ, ಇಂತೀ ಗುಣಕ್ಕೆ ಒಪ್ಪಿ, ಭಕ್ತನೆಂಬ ಕೃತ್ಯದ ಮತ್ತರನೊಪ್ಪ ಬಂಕೇಶ್ವರಲಿಂಗ.