Index   ವಚನ - 85    Search  
 
ಸೂಜಿಯ ಹಿನ್ನಿಯಲ್ಲಿ ಮುಗಿಲ ತೋರದ ದಾರ ಹಿಡಿಯಿತ್ತು. ಸೂಜಿಯ ಮೊನೆ ಹಳೆಯ ಅರಿವೆಯ ಚುಚ್ಚಲಾರದು. ಹಿನ್ನಿ ಹಿಡದ ಭೇದವ ನೋಡಾ ! ಮೊನೆ ಗೆಲ್ಲದು ಹಿನ್ನಿಯ ಭಾರಕ್ಕಂಜಿ. ಹಿನ್ನಿಯ ನನ್ನಿಯ ಮಾಡಿ, ಚೆನ್ನಾಗಿ ಚುಚ್ಚಲಾಗಿ, ಹಿನ್ನಿ ಕಿತ್ತು ಮೊನೆ ಹೋಯಿತ್ತು. ಹಚ್ಚಡ ಎಣೆಗೂಡಿತ್ತು, ಬಂಕೇಶ್ವರಲಿಂಗದಲ್ಲಿ.