Index   ವಚನ - 87    Search  
 
ಇರುಹಿನ ಕಾಲಿನಲ್ಲಿ ಮೂರು ಮೊರಡಿ ಹುಟ್ಟಿದವು. ಒಂದು ಗಡಿಗೆಯ ರೂಪು, ಒಂದು ಅಡಿಗಲ್ಲಿನ ಅಂದ, ಒಂದು ಕೊಡಗೂಸಿನ ಚೆಂದ. ಆ ಗಡಿಗೆಯ ಅಡಿಗಲ್ಲ, ಕೊಡಗೂಸು ಕುಡಿದಳು. ಆ ಇರುಹೆಯ ಕಾಲು ಕೊಡಗೂಸಿನಲ್ಲಿ ಅದೆ. ಬಂಕೇಶ್ವರಲಿಂಗವು ಎಲ್ಲಿ ಹೋದನೆಂದರಿಯೆ.