Index   ವಚನ - 92    Search  
 
ಶುಕ್ಲಪರ್ವತದಲ್ಲಿ ಒಂದು ಮತ್ತಗಜ ಬಿಟ್ಟಾಡುತ್ತಿದೆ. ಕಟ್ಟಿಗೆ ಸಿಕ್ಕದು, ಪ್ರತಿಗಜದೊತ್ತಿಗೆ ಬಾರದು. ಅದು ಚಿತ್ತಜನ ಮಾತಂಗ. ಹೇಮಕೂಟ ರಸ, ಮೊತ್ತದ ಕೋಲುಮೆ. ಗಣಿಕೆಯರ ಏಕಾಂತದ ವಾಸ, ಚಿತ್ರಜ್ಞನ ಚಿತ್ತದ ಲೆಕ್ಕಣಿಕೆಯ ಕಡ್ಡಿ. ಇಂತೀ ಭಿತ್ತಿಯನರಿದ ಚಿತ್ತದ ಮತ್ತಮಾತಂಗವನೊತ್ತಿ ಮುರಿ, ಬಂಕೇಶ್ವರಲಿಂಗವನರಿವುದಕ್ಕೆ.