ಮೂರು ಗಳಿಗೆಯನೊಂದುಗೂಡಿ,
ಹೊರೆಯಲ್ಲಿ ಐದು ಕತ್ತರಿಸಲಾಗಿ,
ಆರು ಹೋಳಾಯಿತ್ತು.
ಆರಕ್ಕೆ ಮೂರ ಪ್ರತಿಯನಿಕ್ಕಲಾಗಿ,
ಸೂಜಿಯ ಮೊನೆಯ ಕೊನೆಯಲ್ಲಿ
ಆರಡಗಿ ಮೂರೊಡಗೂಡಿದವು.
ಮೀರಿ ಹೊಲಿವುದಕ್ಕೆ ಒಡಗೂಡುವ ಹೋಳ ಕಾಣೆ.
ಇಂತೀ ಗುಣವಡಗಿದ ಮತ್ತೆ, ಷಡುಸ್ಥಲ ತ್ರಿವಿಧಕೂಟ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನದೇವರಲ್ಲಿಯೆ ಒಡಗೂಟ.
Art
Manuscript
Music
Courtesy:
Transliteration
Mūru gaḷigeyanondugūḍi,
horeyalli aidu kattarisalāgi,
āru hōḷāyittu.
Ārakke mūra pratiyanikkalāgi,
sūjiya moneya koneyalli
āraḍagi mūroḍagūḍidavu.
Mīri holivudakke oḍagūḍuva hōḷa kāṇe.
Intī guṇavaḍagida matte, ṣaḍusthala trividhakūṭa,
prasanna kapilasid'dha mallikārjunadēvaralliye oḍagūṭa.