Index   ವಚನ - 32    Search  
 
ಕೆಮ್ಮ ಕೆಮ್ಮನೆ ಕೇಳಯ್ಯ. ಬ್ರಹ್ಮಾಂಡವ ಬೆರಣಿಯ ಮಾಡಿ, ಅಯ್ಯಾ ಕಾಲಕರ್ಮವೆಂಬ ಯುಗಜುಗಂಗಳನೆಲ್ಲವ ಬಣ್ಣಿಗದೆನೆಯಂ ಮಾಡಿ, ಅವ ಹುರಿವನು, ಒರಸುವನು, ಮುಕ್ಕುವನು. ಅದೆಂತೆಂದಡೆ: `ಈಶಃ ಸರ್ವಸ್ಯ ಜಗತಃ ಪ್ರೇರಕೋ ವಿಶ್ವಭುತ್ ಪ್ರಭುಃ' ಇತೆಂದುದು ಶ್ರುತಿ. ಸರ್ವಜಗಂಗಳ ಪುಟ್ಟಿಸುವ, ರಕ್ಷಿಸುವ, ಭಕ್ಷಿಸುವ ತನ್ನಿಚ್ಛೆಗಾರ ಸೊಡ್ಡಳದೇವನು.