Index   ವಚನ - 85    Search  
 
ವೇದಂಗಳು ನಿಜವ ಬಲ್ಲಡೆ, ವಟ್ಟಂಕುರರ ಮರೆಯಬೇಕಲ್ಲದೆ, ಚನ್ನಯ್ಯ ಕಕ್ಕಯ್ಯಗಳ ಮೆರೆಯಲೇಕೆ? ಶಾಸ್ತ್ರಂಗಳು ಸತ್ಯವ ನುಡಿದಡೆ, ಶಾಸ್ತ್ರಂಗಳ ಮಾತಿಂಗೆ ಹೇಸಿ, ಕಿರಾತಬೊಮ್ಮಣ್ಣಂಗಳ ಮೆರೆಯಲೇಕೆ? ಆಗಮಂಗಳು ಆಚಾರವನರಿದಡೆ, ಆಗಮಂಗಳ ಮೆರೆಯದೆ, ಕೆಂಬಾವಿಯ ಭೋಗಣ್ಣಗಳ ಹಿಂದುರುಳುತ್ತ ಹೋಗಿ ಮರೆಯಲೇಕೆ? ಇಂತೀ ವೇದಶಾಸ್ತ್ರಾಗಮಂಗಳು ಶಿವನಾದಿಯಂತವನರಿದಡೆ, ಸಾಮವೇದಿಗಳು ಶ್ವಪಚಯ್ಯಂಗೆ ಶಿಷ್ಯರಾಗಲೇಕೆ? ವಾದಿಸಿದರೆಲ್ಲರು ಪ್ರತಿವಾದಿಗಳಾದರು ನಿಮ್ಮಂತವನರಿಯದೆ. ಅಭೇದ್ಯವು, ಘನಕ್ಕೆ ಘನವು, ಶಂಭು ಸೊಡ್ಡಳ.