ಸುರರೆಲ್ಲಾ ಮೇಣು ಸತ್ಯಕವಪ್ಪ ದ್ವಿಜರು ತಿರಿಯಕ್ಕಾಗಿ
ವಿಭೂತಿಯ ಧರಿಸಿ ಇಹವರು,
ನಿಷ್ಟಿಯರೆಲ್ಲಾ ಮೇಣು ಪಟ್ಟವರ್ಧನರು.
ಬಟ್ಟಿತ್ತಾಗಿಯೆ ಬೊಟ್ಟನಿಟ್ಟು ಇಹವರು,
ಸಿದ್ಧಾಯವ ತೆತ್ತು ಬಿತ್ತಿಯೆಂಬ ಒಕ್ಕಲಿಗರಾದವರು.
ಅರ್ಧಚಂದ್ರಾಕೃತಿಯ ಗಂಧದವರು ಕೀಳುಜಾತಿಗಳಯ್ಯಾ.
ನೀಳಗಂಧದವರೆಂದು ಹೇಳುವದು ಶೈವದೊಳಗಣ ವಿಭೂತಿಯ ಕಲ್ಪ.
ಓಂ ತ್ರಿಪುಂಡ್ರಂ ಸುರವಿಪ್ರಾಣಾಂ ವರ್ತುಳಂ ನೃಜವೈಶ್ಯಯೊಃ |
ಅರ್ಧಚಂದ್ರಂತು ಶೂದ್ರಾಣಾಂ ಅನ್ಯೇಷಾಮೂಧ್ರ್ವ ಪುಂಡ್ರಕಂ ||
ಎಂಬ ವಚನವಿಡಿದು,
ಬತ್ತಲೆಗೊಂಬ ಮಾತಿನಲ್ಲಿ, ಮೆಚ್ಚ ಸೊಡ್ಡಳ.
Art
Manuscript
Music
Courtesy:
Transliteration
Surarellā mēṇu satyakavappa dvijaru tiriyakkāgi
vibhūtiya dharisi ihavaru,
niṣṭiyarellā mēṇu paṭṭavardhanaru.
Baṭṭittāgiye boṭṭaniṭṭu ihavaru,
sid'dhāyava tettu bittiyemba okkaligarādavaru.
Ardhacandrākr̥tiya gandhadavaru kīḷujātigaḷayyā.
Nīḷagandhadavarendu hēḷuvadu śaivadoḷagaṇa vibhūtiya kalpa.
Ōṁ tripuṇḍraṁ suraviprāṇāṁ vartuḷaṁ nr̥javaiśyayoḥ |
ardhacandrantu śūdrāṇāṁ an'yēṣāmūdhrva puṇḍrakaṁ ||
emba vacanaviḍidu,
battalegomba mātinalli, mecca soḍḍaḷa.