Index   ವಚನ - 99    Search  
 
ಸೊಣಗಂಗೆ [ಖ]ಂಡವ ಚೆಲ್ಲುವ ತೆರನಂತೆ, ಸಂಸಾರಿಗೆ ಸಂಸಾರವ ಚೆಲ್ಲದೆ, ತೋರುವನೆ ಶರಣಪಥಂಗಳ? ತೋರುವನೆ ಭಕ್ತಿಪಥಂಗಳ? ಅದೆಂತೆಂದಡೆ: ಅಶ್ರುತಿಃ ಕರ್ಣಪೂರಂ ಚ ಶ್ರುತೋ ಧರ್ಮೋಪ್ಯರೋಚಕಃ | ಚರ್ಮಖಂಡನ ಭಕ್ಷಾಣಾಂ ಶ್ವಾನಮನ್ನ ಮರೋಚಕಂ || ಎಂದುದಾಗಿ, ಸೊಡ್ಡಳದೇವ ತಾನೊಲ್ಲದವರ ಭವದುಃಖ ದೋಣೆಯಲೂಡುವ.